ರಾಷ್ಟ್ರೀಯ ಆರೋಗ್ಯ ಮಿಷನ್

ಕರ್ನಾಟಕ ಸರ್ಕಾರ

ಕರ್ನಾಟಕ ಹೆಮೊಫಿಲಿಯಾ ರಿಜಿಸ್ಟ್ರಿ

17th ಏಪ್ರಿಲ್

ವಿಶ್ವದ ಹಿಮೋಫಿಲಿಯಾ ದಿನ


ಹಿಮೋಫಿಲಿಯಾ ರೋಗವನ್ನು ಸರಳವಾಗಿ ರಕ್ತಸ್ರಾವ ಸಮಸ್ಯೆ ಎಂದು ಹೇಳಬಹುದು. ಮಾನವನ ದೇಹದಲ್ಲಿ ರಕ್ತಸ್ರಾವವಾಗದಂತೆ ನೋಡಿಕೊಳ್ಳುವ 13 ಪ್ರೊಟೀನ್‍ಗಳಿರುತ್ತವೆ. ಈ 13 ಪ್ರೊಟೀನ್‍ಗಳಲ್ಲಿ ಒಂದು ಪ್ರೊಟೀನ್‍ನಲ್ಲಿ ಲೋಪವಿದ್ದರೂ, ರಕ್ತಸ್ರಾವ ಶುರುವಾಗುತ್ತೆ. ಸಣ್ಣ ಪ್ರಮಾಣದ ಗಾಯವಾದರೂ ರಕ್ತಸ್ರಾವ ನಿಲ್ಲುವುದಿಲ್ಲ. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಮೂಳೆ, ಮಾಂಸಖಂಡ ಮತ್ತು ಕೀಲುಗಳಲ್ಲಿ ರಕ್ತಸ್ರಾವವಾಗುತ್ತೆ. ವಿಶ್ವ ಫೆಡರೇಷನ್ ಆಫ್ ಹಿಮೋಫಿಲಿಯಾ ಪ್ರಕಾರ, ಪ್ರತಿ ವರ್ಷ ಜಗತ್ತಿನಲ್ಲಿ ಸುಮಾರು 10 ಸಾವಿರ ಮಕ್ಕಳು ಹಿಮೋಫಿಲಿಯಾ ಸಮಸ್ಯೆಯೊಂದಿಗೆ ಜನಿಸುತ್ತಾರೆ.

ಹಿಮೋಫಿಲಿಯಾ ರೋಗವನ್ನು ಕನ್ನಡದಲ್ಲಿ ಕುಸುಮ ರೋಗವೆಂದೂ ಕರೆಯುತ್ತಾರೆ. ಆದರೆ, ಕುಸುಮ ಎಂಬ ಹೆಸರಿದೆ ಎಂಬ ಮಾತ್ರಕ್ಕೆ ಇದು ಕೋಮಲ ರೋಗವಲ್ಲ. ಸಾವಿನ ರೋಗ. ಅನುವಂಶಿಕವಾಗಿ ಹರಡುವ ಕಾಯಿಲೆ. ರಕ್ತಸ್ರಾವವೇನಾದರೂ ಮೆದುಳು, ಜಠರ ಮತ್ತು ಕುತ್ತಿಗೆ ಭಾಗದಲ್ಲಿ ಆದರೆ, ರೋಗಿಗಳು ಬದುಕುವುದು ವಿರಳಾತಿವಿರಳ. ಹಿಮೊಫಿಲಿಯಾ ಎಂದರೆ ರಕ್ತಪ್ರೀತಿ ಎಂದರ್ಥ. ಹಿಮೋ ಎನ್ನವು ಪದ ಹುಟ್ಟಿದ್ದು ಎಂದರೆ ಗ್ರೀಕ್‍ನ ಹೈಮೋ ಎಂಬ ಪದದ ಮೂಲಕ. ಹೈಮೋ ಎಂದರೆ ರಕ್ತ. ಫಿಲಿಯಾ ಎಂದರೆ ಪ್ರೀತಿ. ಅರ್ಥಾತ್ ರಕ್ತಪ್ರೀತಿ.

Registry Login!